ಕನ್ನಡ ಸಿರಿ ಸಂಪದ

– ಗದ್ಯ, ಪದ್ಯ, ವ್ಯಾಕರಣ ಮತ್ತು ಚಟುವಟಿಕೆ
ಕನ್ನಡವು ವಿಶ್ವದ ಅತ್ಯಂತ ಪ್ರಾಚೀನವಾದ ಹಾಗೂ ಸಂಪದ್ಭರಿತವಾದ ಭಾಷೆಯಲ್ಲಿ ಒಂದು. ಸುಮಾರು ಎರಡು ಸಾವಿರ ವರ್ಷಗಳಿಗಿಂತ ಹೆಚ್ಚು ಕಾಲದದಿಂದ ಬಹಳ ವ್ಯವಸ್ಥಿತವಾಗಿ ಹಾಗೂ ವೈಜ್ಞಾನಿಕವಾಗಿ ಬೆಳೆದುಕೊಂಡು ಬಂದಿದೆ. ಪಂಪ,ರನ್ನರ ಕಾಲದಿಂದ ಆರಂಭವಾದ ನಮ್ಮ ಸಾಹಿತ್ಯ ಪರಂಪರೆ ಇಂದಿನವರೆಗೂ ನಿರಂತರವಾಗಿ ಮುಂದುವರೆದಿದೆ.

“ಕನ್ನಡ ಸಿರಿ ಸಂಪದ” ಸರಣಿಯ 8 ಪಠ್ಯ ಪುಸ್ತಕಗಳ ಮೂಲಕ ಕನ್ನಡ ಭಾಷೆ ಹಾಗೂ ಸಾಹಿತ್ಯದ ಸಂಪತ್ತಿನ ಪರಿಚಯವನ್ನು ವಿದ್ಯಾರ್ಥಿಗಳಿಗೆ ಮಾಡಿಕೊಡುವ ನಮ್ರ ಪ್ರಯತ್ನವಾಗಿದೆ.

ಈ ಪಠ್ಯ ಪುಸ್ತಕಗಳನ್ನು ವಿದ್ಯಾರ್ಥಿಗಳ ವಯೋಮಾನ, ಕಲಿಯುವ ಆಸಕ್ತಿ ಹಾಗೂ ಗ್ರಹಿಸುವ ಸಾಮರ್ಥ್ಯಗಳನ್ನು ಗಮನದಲ್ಲಿರಿಸಿಕೊಂಡು ರಚಿಸಲಾಗಿದೆ.

ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅನ್ವಯವಾಗುವಂತೆ ಕನ್ನಡವನ್ನು ಪ್ರಥಮ / ದ್ವಿತೀಯ / ತೃತೀಯ ಭಾಷೆಯಾಗಿ ಕಲಿಸಲು ಪುಸ್ತಕಗಳ (ಟೆಕ್ಸ್ಟ್ – ಕಮ್ – ವರ್ಕ್‌ಬುಕ್) ಸರಣಿಯನ್ನು ರಚಿಸಲಾಗಿದ್ದು ಗದ್ಯ,ಪದ್ಯ,ನಾಟಕ ಮುಂತಾದವುಗಳ ಜೊತೆಗೆ ಹಲವು ಆಸಕ್ತಕಾರವಾದ ಚಟುವಟಿಕೆಗಳ ಮೂಲಕ ಸುಲಭವಾಗಿ ಹಾಗೂ ಸಂತೋಷವಾಗಿ ವಿದ್ಯಾರ್ಥಿಗಳು ಕಲಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಇಲ್ಲಿಯ ಉದ್ದೇಶ.

ರನ್ನ, ಬಸವಣ್ಣ, ಕುಮಾರವ್ಯಾಸ, ಸರ್ವಜ್ಞ ಮುಂತಾದ ಅಭಿಜಾತ ಕವಿಗಳಿಂದ ಹಿಡಿದು ಸಿದ್ದಲಿಂಗಯ್ಯ, ಡುಂಡಿರಾಜ್, ಜಯಂತ ಕಾಯ್ಕಿಣಿ, ಮುಂತಾದ ಹೊಸ ತಲೆಮಾರಿನ ಲೇಖಕರವರೆಗೆ ಐವತ್ತಕ್ಕೂ ಹೆಚ್ಚಿನ ಬರಹಗಾರರ ಆಯ್ದ ಪಠ್ಯಗಳನ್ನು ಬಳಸಲಾಗಿದೆ. ಅಲ್ಲದೆ ಕನ್ನಡದ ಮಕ್ಕಳಿಗಾಗಿ ಅನುವಾದದ ಮೂಲಕ ಮಹಾತ್ಮಗಾಂಧಿ, ರಸ್ಕಿನ್ ಬಾಂಡ್, ಅಬ್ದುಲ್ ಕಲಂ, ಆರ್. ಕೆ. ನಾರಾಯಣ್ ಹಾಗೂ ಅನೇಕ ಅನ್ಯಭಾಷಾ ಲೇಖಕರ ಪರಿಚಯಿಸಲಾಗಿದೆ.

ಕಲೆ, ಕ್ರೀಡೆ, ವಿಜ್ಞಾನ, ಇತಿಹಾಸ, ಧಾರ್ಮಿಕ ಸಾಮರಸ್ಯ, ಸಂಸ್ಕೃತಿ, ಪರಿಸರ, ಆರೋಗ್ಯ ಶಾಸ್ತ್ರ, ಪ್ರವಾಸ, ಹವ್ಯಾಸ, ಜಾನಪದ, ವಿಶಿಷ್ಟ ಸಾಧಕರ ಬಗ್ಗೆ ಅಲ್ಲದೆ ಕತೆ, ಪದ್ಯ, ನಾಟಕ, ಲೇಖನ, ವ್ಯಕ್ತಿಚಿತ್ರ, ಅನುಭವ ಕಥನ, ಹರಟೆ, ಪತ್ರ ಲೇಖನ ಇನ್ನೂ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಸರಳ ಹಾಗೂ ಸುಂದರ ಪಾಠ-ಪದ್ಯಗಳ ಪಠ್ಯ ಪುಸ್ತಕವಾಗಿದೆ.

Complementary Teacher hand book

KANNADA SIRI SAMPADA - TEACHER HAND BOOK

ಆಯ್ದ ಪದ್ಯಗಳ ರಾಗ ಸಂಯೋಜನೆ (CD) Complimentary