ಕನ್ನಡ ಸಂಪದ ಕಾಪಿ ರೈಟಿಂಗ್ ಪುಸ್ತಕ ಸರಣಿ

ಮೊದಲನೆಯದಾಗಿ ಕನ್ನಡ ಭಾಷೆಯನ್ನು ಹಂತ ಹಂತವಾಗಿ ಹಾಗೂ ವೈಜ್ಞಾನಿಕವಾಗಿ ಚೆನ್ನಾಗಿ ಓದಿ, ಬರೆದು, ಕಲಿಯಲು ಅನುಕೂಲವಾಗುವ ರೀತಿಯಲ್ಲಿ ಕೈ ಬರಹ ಅಭ್ಯಾಸ ಸರಣಿಯನ್ನು ರಚಿಸಲಾಗಿದೆ.
ಮಕ್ಕಳಿಗೆ ಆಪ್ತವಾಗುವ ಹಾಗೂ ಚಿರಪರಿಚಿತವಾದ ವಸ್ತು, ಪ್ರಾಣಿ ಮತ್ತು ಸಂಗತಿಗಳ ಮೂಲಕ ಸಚಿತ್ರವಾಗಿ ನಿರೂಪಣೆ ನೀಡಲಾಗಿದೆ.

ಸುಲಭವಾಗಿ ಕಲಿಯುವ ಮತ್ತು ಸೃಜನಾತ್ಮಕ ಮಾದರಿಯ ಚಟುವಟಿಕೆಗಳು ಹಾಗೂ ಅಧ್ಯಾಪಕರಿಗೆ ಉಪಯುಕ್ತವಾದ ವಿವರಣೆ ಮತ್ತು ಮಾರ್ಗದರ್ಶಕ ಸೂಚನೆಗಳನ್ನು ಕೊಡಲಾಗಿದೆ.

ಸರಣಿಯ ಪುಸ್ತಕಗಳನ್ನು ವಿಷಯದ ಕಠಿಣತೆಯಾ ಆಧಾರಿತವಾಗಿ ವಿಭಾಗಿಸಲಾಗಿದ್ದು, ವಿವಿಧ ಬಗೆಯ ವಾಕ್ಯಗಳ ಪರಿಚಯ ಮತ್ತು ಅಭ್ಯಾಸಗಳನ್ನು ನೀಡಲಾಗಿದ್ದು ಮಕ್ಕಳು ಕೈಬರಹದ ಅಭ್ಯಾಸದ ಜೊತೆ ಜೊತೆಗೆ ಸುಲಭವಾಗಿ ವ್ಯಾಕರಣವನ್ನು ಕಲಿಯಲು ಸಾಧ್ಯ.

ಕೇವಲ ಬರವಣಿಗೆಯ ಅಭ್ಯಾಸ ಪುಸ್ತಕವಾಗಿ ಮಾತ್ರವಲ್ಲದೆ, ಮಕ್ಕಳು ಕರ್ನಾಟಕದ ವಿವಿಧ ಜಿಲ್ಲೆಗಳು, ವಿಶಿಷ್ಟ ಸಾಧಕರ ಪರಿಚಯ ಹಾಗೂ ಭಾರತದ ಎಲ್ಲಾ ರಾಜ್ಯಗಳ ಪರಿಚಯ ಹಾಗೂ ವಿಷಯಗಳನ್ನು ಸಚಿತ್ರವಾಗಿ ತಿಳಿದುಕೊಳ್ಳುವ ಒಂದು ಅಪರೂಪದ ಅವಕಾಶ.